ಪೂರ್ವಭಾವಿ ನಿರ್ಣಯ ಪ್ರಾಧಿಕಾರದ ವಿಳಾಸ
ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ / ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ 2017ರ, ಪ್ರಕರಣ 97ರ ಅಡಿಯಲ್ಲಿ ಪೂರ್ವಭಾವಿ ನಿರ್ಣಯವನ್ನು ಪಡೆಯಲು ಇಚ್ಚಿಸುವ ಅರ್ಜಿದಾರನು ಸಂಬಂಧಪಟ್ಟ ರಾಜ್ಯದ ಪೂರ್ವಭಾವಿ ನಿರ್ಣಯ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
ಕರ್ನಾಟಕ ರಾಜ್ಯದಲ್ಲಿ, ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ / ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ 2017ರ, ಪ್ರಕರಣ 96ರ ಅಡಿಯಲ್ಲಿ ಪೂರ್ವಭಾವಿ ನಿರ್ಣಯ ಪ್ರಾಧಿಕಾರವನ್ನು ಅಧಿಸೂಚನೆ ಸಂಖ್ಯೆ: FD 47/CSL-2017 ದಿನಾಂಕ: 04-10-2017 ಮತ್ತು ಅಧಿಸೂಚನೆ ಸಂಖ್ಯೆ: FD 47/CSL-2017 ದಿನಾಂಕ: 04-11-2019ರಲ್ಲಿ ಸ್ಥಾಪಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ, ಸ್ಥಾಪಿಸಿರುವ ಪೂರ್ವಭಾವಿ ನಿರ್ಣಯ ಪ್ರಾಧಿಕಾರದ ಕಛೇರಿ ವಿಳಾಸವು ಕೆಳಕಂಡಂತಿದೆ: -
| ಕಚೇರಿ ವಿಳಾಸ |
ದೂರವಾಣಿ ಸಂಖ್ಯೆ |
ಕರ್ನಾಟಕ ಪೂರ್ವಭಾವಿ ನಿರ್ಣಯ ಪ್ರಾಧಿಕಾರ ಕೊಠಡಿ ಸಂಖ್ಯೆ: 603 ಮತ್ತು 604, 6 ನೇ ಮಹಡಿ, ವಾಣಿಜ್ಯ ತೆರಿಗೆ ಕಾರ್ಯಾಲಯ-01, 1 ನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು -560 009. |
080-22342682 ಇ-ಮೇಲ್ ID: adv-ruling@ka.gov.in |
ಪೂರ್ವಭಾವಿ ನಿರ್ಣಯ ಅಪೀಲು ಪ್ರಾಧಿಕಾರದ ವಿಳಾಸ
ಅರ್ಜಿದಾರನು ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ / ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ 2017ರ ಪ್ರಕರಣ 98 (6) ರ ಅಡಿಯಲ್ಲಿ ನಿರ್ಣಯಿಸಿದ ಪೂರ್ವಭಾವಿ ನಿರ್ಣಯ ಆದೇಶದಿಂದ ಬಾಧಿತನಾಗಿದ್ದಲ್ಲಿ, ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ / ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ 2017ರ ಪ್ರಕರಣ 100 ರ ಅಡಿಯಲ್ಲಿ ಪೂರ್ವಭಾವಿ ನಿರ್ಣಯ ಅಪೀಲು ಪ್ರಾಧಿಕಾರಕ್ಕೆ ಅಪೀಲು ಸಲ್ಲಿಸಬಹುದು.
ಕರ್ನಾಟಕ ರಾಜ್ಯದಲ್ಲಿ, ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ / ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ 2017ರ, ಪ್ರಕರಣ 99ರ ಅಡಿಯಲ್ಲಿ ಪೂರ್ವಭಾವಿ ನಿರ್ಣಯ ಅಪೀಲು ಪ್ರಾಧಿಕಾರವನ್ನು ಅಧಿಸೂಚನೆ ಸಂಖ್ಯೆ: FD 47/CSL-2017 ದಿನಾಂಕ: 25-04-2018ರಲ್ಲಿ ಸ್ಥಾಪಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ, ಸ್ಥಾಪಿಸಿರುವ ಪೂರ್ವಭಾವಿ ನಿರ್ಣಯ ಅಪೀಲು ಪ್ರಾಧಿಕಾರದ ಕಛೇರಿ ವಿಳಾಸವು ಕೆಳಕಂಡಂತಿದೆ: -
| ಕಚೇರಿ ವಿಳಾಸ |
ದೂರವಾಣಿ / ಫ್ಯಾಕ್ಸ್ ಸಂಖ್ಯೆ & AAAR ಕಚೇರಿ ಇ-ಮೇಲ್ ವಿಳಾಸ |
ಕರ್ನಾಟಕ ಪೂರ್ವಭಾವಿ ನಿರ್ಣಯ ಅಪೀಲು ಪ್ರಾಧಿಕಾರ, ಕೊಠಡಿ ಸಂಖ್ಯೆ: 603 ಮತ್ತು 604, 6 ನೇ ಮಹಡಿ, ವಾಣಿಜ್ಯ ತೆರಿಗೆ ಕಾರ್ಯಾಲಯ-01, 1 ನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು -560 009. |
080-22342682, 080-22263595 (ಫ್ಯಾಕ್ಸ್ & ಪಿಎ), ಇ-ಮೇಲ್ ID: appadv-ruling@ka.gov.in |